ಅಹಮದಾಬಾದ್: ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೊಹ್ಲಿ ಎಂಬ ಹೆಸರು ಕೇವಲ ಅಭಿಮಾನಿಗಳ ಪ್ರೀತಿಯಲ್ಲ, ಅದು ಅವರ ಬ್ಯಾಟಿಂಗ್ ಪ್ರದರ್ಶನದ ಪರಾಕಾಷ್ಠೆ. ಟಿ20 ವಿಶ್ವಕಪ್(T20 World Cup Final) ಇತಿಹಾಸದಲ್ಲಿ ಭಾರತದ ಪರ ಫೈನಲ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಅಗ್ರ ಎರಡು ಸ್ಕೋರ್ಗಳು ವಿರಾಟ್ ಕೊಹ್ಲಿ ಹೆಸರಿನಲ್ಲೇ ಇವೆ ಎಂಬುದು ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.